Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಸ್ವಯಂ ಉದ್ಯೋಗಕ್ಕೆ ಸರ್ಕಾರದಿಂದ ₹1 ಲಕ್ಷ ಸಬ್ಸಿಡಿ! ಅಲ್ಪಸಂಖ್ಯಾತ ಸಮುದಾಯದವರಿಗಾಗಿ ಈ ವಿಶೇಷ ಯೋಜನೆ – ಇಂದೇ ಅರ್ಜಿ ಹಾಕಿ.

ನಮಸ್ಕಾರ ಓದುಗರೆ, ನೀವು ಸ್ವಂತ ಉದ್ಯೋಗ ಅಥವಾ ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು (KMDC) ನಿಮಗಾಗಿ ಒಂದು ಸುವರ್ಣ ಅವಕಾಶವನ್ನು ತಂದಿದೆ. ‘ಸ್ವಯಂ ಉದ್ಯೋಗ ಯೋಜನೆ’ಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗದೊಂದಿಗೆ ಭಾರಿ ಸಹಾಯಧನವನ್ನು ನೀಡಲಾಗುತ್ತಿದೆ.

ಏನಿದು ಯೋಜನೆ? ಸಣ್ಣ ಪ್ರಮಾಣದ ಕರಕುಶಲ ಉದ್ಯಮ, ಸೇವಾ ವಲಯ ಅಥವಾ ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಇರುವ ಉದ್ಯಮವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಆರ್ಥಿಕ ನೆರವು ನೀಡುತ್ತದೆ.

ಯಾರಿಗೆ ಸಿಗಲಿದೆ ಈ ಸೌಲಭ್ಯ? ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಜೈನ್ ಸಮುದಾಯದವರು ಈ ಯೋಜನೆಯ ಲಾಭ ಪಡೆಯಬಹುದು.

ಸಿಗುವ ಲಾಭ ಎಷ್ಟು? ಈ ಯೋಜನೆಯಡಿ ನೀವು ಕೈಗೊಳ್ಳುವ ಉದ್ಯಮದ ಒಟ್ಟು ವೆಚ್ಚದ 33% ರಷ್ಟು ಅಥವಾ ಗರಿಷ್ಠ 1.00 ಲಕ್ಷ ರೂಪಾಯಿಗಳವರೆಗೆ ಸಹಾಯಧನ (Subsidy) ದೊರೆಯಲಿದೆ.

ಅರ್ಜಿಗೆ ಇರಬೇಕಾದ ಅರ್ಹತೆಗಳು:

  1. ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

  2. ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.

  3. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದವರಿಗೆ ₹81,000 ಮತ್ತು ನಗರ ಭಾಗದವರಿಗೆ ₹1,03,000 ಮೀರಬಾರದು.

  4. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯೋಗದಲ್ಲಿ ಇರಬಾರದು.

  5. ಈ ಹಿಂದೆ ಕೆ.ಎಂ.ಡಿ.ಸಿ (KMDC) ಯಿಂದ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು.

ಬೇಕಾಗುವ ಪ್ರಮುಖ ದಾಖಲೆಗಳು:

  • ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿ ನಕಲು.

  • ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಫೋಟೋಗಳು.

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

  • ಆಧಾರ್ ಕಾರ್ಡ್ ಪ್ರತಿ.

  • ನೀವು ಕೈಗೊಳ್ಳಲಿರುವ ಉದ್ಯಮದ ಯೋಜನಾ ವರದಿ (Project Report).

ಅರ್ಜಿ ಸಲ್ಲಿಸುವ ವಿಧಾನ: ಮೊದಲು ನಿಗಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ. ನಂತರ ಆ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಕಚೇರಿಗೆ ಸಲ್ಲಿಸಬೇಕು. ಶಾಸಕರ ನೇತೃತ್ವದ ಸಮಿತಿಯು ಅರ್ಜಿದಾರರನ್ನು ಆಯ್ಕೆ ಮಾಡಿದ ನಂತರ, ಸಹಾಯಧನವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

Apply Online

Click here

Leave a Comment