🎓 ವಿಕಲಚೇತನ ವಿದ್ಯಾರ್ಥಿಗಳಿಗಾಗಿ National Overseas Scholarship (NOS)
ವಿಕಲಚೇತನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುವ ಉದ್ದೇಶದಿಂದ National Overseas Scholarship (NOS) ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯು Rights of Persons with Disabilities Act, 2016 ಅಡಿಯಲ್ಲಿ ಗುರುತಿಸಲಾದ ವಿಕಲಚೇತನತೆ ಹೊಂದಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.
ದೃಷ್ಟಿ, ಶ್ರವಣ, ಮಾತು, ಚಲನಶಕ್ತಿ, ಮಾನಸಿಕ ಹಾಗೂ ಇತರೆ ವಿಕಲಚೇತನತೆ ಹೊಂದಿರುವ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು. ಯೋಜನೆಯನ್ನು Department of Empowerment of Persons with Disabilities ವತಿಯಿಂದ Offline ಮೂಲಕ ಜಾರಿಗೊಳಿಸಲಾಗುತ್ತಿದೆ.
ಅನೇಕ ಬಾರಿ ವಿಕಲಚೇತನ ವಿದ್ಯಾರ್ಥಿಗಳು ಶಾರೀರಿಕ, ಆರ್ಥಿಕ, ಮಾನಸಿಕ ಅಡೆತಡೆಗಳಿಂದ ತಮ್ಮ ಪ್ರತಿಭೆಯನ್ನು ಬಳಸಿಕೊಳ್ಳಲು ಸಾಧ್ಯವಾಗದೇ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆ, ಅವರಿಗೆ ಗೌರವಯುತ ಜೀವನ ಕಟ್ಟಿಕೊಳ್ಳಲು ಹಾಗೂ ಉದ್ಯೋಗಾವಕಾಶ ಪಡೆಯಲು ಸಹಾಯ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ.
💰National Overseas Scholarship (NOS) Scholarship ಲಾಭಗಳು
-
ವಾರ್ಷಿಕ ನಿರ್ವಹಣಾ ಭತ್ಯೆ (Maintenance Allowance)
-
USA ಮತ್ತು UK ಹೊರತುಪಡಿಸಿ ಇತರೆ ದೇಶಗಳು: $15,400
-
UK: £9,900
-
-
ಆಕಸ್ಮಿಕ ಭತ್ಯೆ
-
USA ಮತ್ತು ಇತರೆ ದೇಶಗಳು: $1,500
-
UK: £1,100
-
-
ಸಲಕರಣೆ ಭತ್ಯೆ: ₹1,500
-
ಟ್ಯೂಷನ್ ಫೀಸ್: ನಿಜವಾದ ವೆಚ್ಚದ ಆಧಾರದಲ್ಲಿ
-
ವೀಸಾ ಶುಲ್ಕ: ನಿಜವಾದ ವೆಚ್ಚ
-
ಮೆಡಿಕಲ್ ಇನ್ಶುರೆನ್ಸ್: ನಿಜವಾದ ವೆಚ್ಚ
-
ವಾಯು ಮಾರ್ಗ: ಭಾರತದಿಂದ ಶಿಕ್ಷಣ ಸಂಸ್ಥೆಯ ಸಮೀಪದ ಸ್ಥಳದವರೆಗೆ ಇಕಾನಮಿ ಕ್ಲಾಸ್ ವಿಮಾನ ಪ್ರಯಾಣ
-
ಸ್ಥಳೀಯ ಪ್ರಯಾಣ: ರೈಲು / ಬಸ್ ಪ್ರಯಾಣ ವೆಚ್ಚ
-
ಆಕಸ್ಮಿಕ ಪ್ರಯಾಣ ಭತ್ಯೆ: ಪ್ರತಿ ಪ್ರಯಾಣಕ್ಕೆ $20 ಅಥವಾ ಸಮಾನ ಮೊತ್ತ
✅ ಅರ್ಹತಾ ಮಾನದಂಡ
-
ಅರ್ಜಿದಾರರು ವಿದ್ಯಾರ್ಥಿಯಾಗಿರಬೇಕು
-
ವಿದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ Masters ಅಥವಾ PhD ಪ್ರವೇಶ ಪಡೆದಿರಬೇಕು
-
ಕನಿಷ್ಠ 40% ವಿಕಲಚೇತನತೆ ಇರಬೇಕು
-
ಅರ್ಜಿ ಪ್ರಕಟಣೆ ತಿಂಗಳ ಮೊದಲ ದಿನಕ್ಕೆ 35 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸು
-
ವಾರ್ಷಿಕ ಕುಟುಂಬ ಆದಾಯ ₹6 ಲಕ್ಷ ಮೀರಬಾರದು
❌ ಯಾರು ಅರ್ಜಿ ಹಾಕಲು ಅರ್ಹರಲ್ಲ?
-
Bachelor Degree ಕೋರ್ಸ್‌ಗಳು ಈ ಯೋಜನೆಗೆ ಒಳಪಡಲ್ಲ
-
ಈಗಾಗಲೇ ವಿದೇಶದಲ್ಲಿ ಓದುತ್ತಿರುವ ಅಥವಾ ಬೇರೆ ಸ್ಕಾಲರ್‌ಶಿಪ್ ಮೂಲಕ ಓದಿರುವವರು
-
ಒಂದೇ ಪೋಷಕರ ಎರಡಕ್ಕಿಂತ ಹೆಚ್ಚು ವಿಕಲಚೇತನ ಮಕ್ಕಳು (ಟ್ವಿನ್ಸ್‌ಗೆ ವಿನಾಯಿತಿ)
-
ಒಂದೇ ಹಂತದ (Masters/PhD) ವಿದ್ಯಾಭ್ಯಾಸವನ್ನು ಪುನಃ ಮಾಡುವವರು
-
ಇತರೆ ಸ್ಕಾಲರ್‌ಶಿಪ್ ಅಥವಾ ಸ್ಟೈಪೆಂಡ್ ಪಡೆಯುತ್ತಿರುವವರು
📨 ಅರ್ಜಿ ಸಲ್ಲಿಸುವ ವಿಧಾನ (Offline)
-
ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿ
-
ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ಅಧೀನ ಕಾರ್ಯದರ್ಶಿ (ವಿದ್ಯಾರ್ಥಿವೇತನಗಳು)
ಡಿಪಾರ್ಟ್ಮೆಂಟ್ ಆಫ್ ಎಂಪವರ್ಮೆಂಟ್ ಆಫ್ ಪರ್ಸನ್ಸ್ ವಿಥ್ ಡಿಸೇಬಲಿಟಿ
ಕೊಠಡಿ ಸಂಖ್ಯೆ 516, 5ನೇ ಮಹಡಿ,
ಪಿಟಿ . ದೀನದಯಾಳ್ ಅಂತ್ಯೋದಯ ಭವನ,
ಸಿಜಿಒ ಕಾಂಪ್ಲೆಕ್ಸ್, ಲೋಧಿ ರಸ್ತೆ,
ನವ ದೆಹಲಿ – 110003.
Under Secretary (Scholarships)
Department of Empowerment of Persons with Disabilities
Room No. 516, 5th Floor,
Pt. Deendayal Antyodaya Bhawan,
CGO Complex, Lodhi Road,
New Delhi – 110003.
📌 ಅರ್ಜಿಗಳನ್ನು ವರ್ಷಪೂರ್ತಿ ಸ್ವೀಕರಿಸಲಾಗುತ್ತದೆ
📄 ಅಗತ್ಯ ದಾಖಲೆಗಳು
-
ಅರ್ಜಿ ಫಾರ್ಮ್ (2 ಪ್ರತಿಗಳು)
-
ಜನ್ಮ ದಿನಾಂಕ ಪ್ರಮಾಣ ಪತ್ರ
-
ವಿಕಲಚೇತನ ಪ್ರಮಾಣ ಪತ್ರ
-
ಆಧಾರ್ / ಮತದಾರರ ಗುರುತಿನ ಚೀಟಿ – Aadhaar / Voter ID
-
ಪ್ಯಾನ್ ಕಾರ್ಡ್ – PAN Card
-
ಬ್ಯಾಂಕ್ ಖಾತೆ ವಿವರ
-
ಆದಾಯ ಪ್ರಮಾಣ ಪತ್ರ
-
ವಿದ್ಯಾರ್ಹತೆ ಪ್ರಮಾಣ ಪತ್ರಗಳು
-
ವಿದೇಶಿ ವಿಶ್ವವಿದ್ಯಾಲಯದ ಪ್ರವೇಶ ಕೊಡುಗೆ
-
ಇತರೆ ಸ್ಕಾಲರ್‌ಶಿಪ್ ಪಡೆಯುತ್ತಿಲ್ಲ ಎಂಬ ಸ್ವಯಂ ಘೋಷಣೆ