ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಂಸ್ಥೆ ಅಸಿಸ್ಟೆಂಟ್ ಪ್ರೊಫೆಸರ್ ರಿಕ್ರಿಟ್ ಮೆಂಟ್ 2026 ಕುರಿತ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 117 ಶೈಕ್ಷಣಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 31 ಜನವರಿ 2026 ರಿಂದ 06 ಮಾರ್ಚ್ 2026 (ಸಂಜೆ 5 ಗಂಟೆಯವರೆಗೆ) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ವೇತನ ವಿವರಗಳನ್ನು ಸಂಪೂರ್ಣವಾಗಿ ಓದುವುದು ಅತ್ಯಂತ ಮುಖ್ಯ.
🔹 NCERT ರಿಕ್ರಿಟ್ ಮೆಂಟ್ 2026 – ಮುಖ್ಯ ವಿವರಗಳು
- ಸಂಸ್ಥೆ ಹೆಸರು: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT)
- ಹುದ್ದೆಗಳ ಹೆಸರು:
- ಪ್ರೊಫೆಸರ್
- ಅಸೋಸಿಯೇಟ್ ಪ್ರೊಫೆಸರ್
- ಅಸಿಸ್ಟೆಂಟ್ ಪ್ರೊಫೆಸರ್
- ಡೆಪ್ಯುಟಿ ಲೈಬ್ರರಿಯನ್
- ಅಸಿಸ್ಟೆಂಟ್ ಲೈಬ್ರರಿಯನ್
- ಒಟ್ಟು ಹುದ್ದೆಗಳು: 117
- ಜಾಹೀರಾತು ಸಂಖ್ಯೆ: 177/2026
- ಅರ್ಜಿ ಆರಂಭ ದಿನಾಂಕ: 31-01-2026 (ಬೆಳಗ್ಗೆ 10:00)
- ಅರ್ಜಿ ಕೊನೆ ದಿನಾಂಕ: 06-03-2026 (ಸಂಜೆ 05:00)
- ಅಧಿಕೃತ ವೆಬ್‌ಸೈಟ್: ncert.nic.in
🔹 ವಿಭಾಗವಾರು ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಗಣಿತ, ವಿಜ್ಞಾನ, ಶಿಕ್ಷಣ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಮನೋವಿಜ್ಞಾನ, ಇಂಗ್ಲಿಷ್, ಹಿಂದಿ, ಉರ್ದು, ಫಿಸಿಕ್ಸ್, ಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕೃಷಿ, ಗ್ರಂಥಾಲಯ ವಿಜ್ಞಾನ ಸೇರಿದಂತೆ ಅನೇಕ ವಿಷಯಗಳಲ್ಲಿ ಹುದ್ದೆಗಳು ಲಭ್ಯವಿವೆ.
👉 ಒಟ್ಟು ಹುದ್ದೆಗಳು: 117
🔹 ಅರ್ಹತಾ ಮಾನದಂಡ (Eligibility Criteria)
✅ ಅಸಿಸ್ಟೆಂಟ್ ಪ್ರೊಫೆಸರ್
- ಸಂಬಂಧಿತ ವಿಷಯದಲ್ಲಿ ಮಾಸ್ಟರ್ ಡಿಗ್ರಿ (55% ಅಂಕ)
- NET / SLET / SET ಅಥವಾ Ph.D. (UGC ನಿಯಮಾನುಸಾರ ವಿನಾಯಿತಿ ಅನ್ವಯಿಸುತ್ತದೆ)
✅ಅಸಿಸ್ಟೆಂಟ್ ಪ್ರೊಫೆಸರ್
- ಸಂಬಂಧಿತ ವಿಷಯದಲ್ಲಿ Ph.D.
- ಕನಿಷ್ಠ 8 ವರ್ಷಗಳ ಬೋಧನೆ ಅಥವಾ ಸಂಶೋಧನಾ ಅನುಭವ
- ಕನಿಷ್ಠ 7 ಸಂಶೋಧನಾ ಪ್ರಕಟಣೆಗಳು
✅ ಪ್ರೊಫೆಸರ್
- ಸಂಬಂಧಿತ ವಿಷಯದಲ್ಲಿ Ph.D.
- ಕನಿಷ್ಠ 10 ವರ್ಷಗಳ ಬೋಧನಾ ಅಥವಾ ಸಂಶೋಧನಾ ಅನುಭವ
- ಕನಿಷ್ಠ 10 ಸಂಶೋಧನಾ ಪ್ರಕಟಣೆಗಳು
✅ ಡೆಪ್ಯುಟಿ / ಅಸಿಸ್ಟೆಂಟ್ ಲೈಬ್ರರಿಯನ್
- ಲೈಬ್ರರಿ ಸೈನ್ಸ್ / ಇನ್ಫಾರ್ಮಶನ್ ಸೈನ್ಸ್ ನಲ್ಲಿ ಮಾಸ್ಟರ್ ಡಿಗ್ರಿ
- NET ಅಥವಾ Ph.D. (ಅಸಿಸ್ಟೆಂಟ್ ಲೈಬ್ರರಿಯನ್ ಗೆ)
🔹 ವೇತನ ವಿವರ (Salary Structure)
- ಪ್ರೊಫೆಸರ್: ₹1,44,200/- ಪ್ರತಿ ತಿಂಗಳು
- ಅಸೋಸಿಯೇಟ್ ಪ್ರೊಫೆಸರ್ / ಡೆಪ್ಯುಟಿ ಲೈಬ್ರರಿಯನ್: ₹1,31,400/- ಪ್ರತಿ ತಿಂಗಳು
- ಅಸಿಸ್ಟೆಂಟ್ ಪ್ರೊಫೆಸರ್ / ಅಸಿಸ್ಟೆಂಟ್ ಲೈಬ್ರರಿಯನ್: ₹57,700/- ಪ್ರತಿ ತಿಂಗಳು
(UGC / NCERT / ಕೇಂದ್ರ ಸರ್ಕಾರದ ನಿಯಮಾನುಸಾರ)
🔹 ವಯೋಮಿತಿ
- UGC / NCERT ನಿಯಮಾನುಸಾರ
- SC / ST / OBC / EWS / PwD ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಲಭ್ಯ
🔹 ಅರ್ಜಿ ಶುಲ್ಕ (Application Fee)
- UR / OBC / EWS: ₹1000/-
- ಮಹಿಳೆ / SC / ST / PwD: ಶುಲ್ಕ ವಿನಾಯಿತಿ
- ಪಾವತಿ ವಿಧಾನ: ಆನ್‌ಲೈನ್ ಮಾತ್ರ
🔹 ಆಯ್ಕೆ ಪ್ರಕ್ರಿಯೆ
- ಶಾರ್ಟ್‌ಲಿಸ್ಟ್
- ಇಂಟರ್ವ್ಯೂ (UGC ನಿಯಮಾನುಸಾರ)
👉 ಅಂತಿಮ ಆಯ್ಕೆ ಇಂಟರ್ವ್ಯೂ ಪ್ರದರ್ಶನ ಆಧಾರಿತವಾಗಿರುತ್ತದೆ
🔹 ಅರ್ಜಿ ಸಲ್ಲಿಸುವ ವಿಧಾನ (How to Apply)
- ncert.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
- Announcement → Vacancy → Academic ಆಯ್ಕೆ ಮಾಡಿ
- ಹೊಸ ರಿಜಿಸ್ಟ್ರೇಷನ್ ಮಾಡಿ
- ಅಗತ್ಯ ವಿವರಗಳನ್ನು ಭರ್ತಿ ಮಾಡಿ
- ದಾಖಲೆಗಳು, ಫೋಟೋ, ಸಹಿ ಅಪ್ಲೋಡ್ ಮಾಡಿ
- ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿ
- ಅರ್ಜಿ ಪ್ರಿಂಟ್‌ಔಟ್ ಉಳಿಸಿಕೊಳ್ಳಿ
⚠️ ಮುಖ್ಯ ಸೂಚನೆ
- ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು
- ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿ ಸ್ವೀಕರಿಸಲಾಗುವುದಿಲ್ಲ